ನಿನ್ನ ಕಂಗಳ ಬಿಸಿಯ ಹನಿಗಳು
ನೂರು ಕಥೆಯಾ ಹೇಳಿವೇ
ನಿನ್ನ ಪ್ರೇಮದ ನುಡಿಯ ಕೇಳಿ
ನೂರು ನೆನಪೂ ಮೂಡಿವೇ....ನಿನ್ನ ಕಂಗಳ..
ತಂದೆಯಾಗಿ ತಾಯಿಯಾಗಿ ಮಮತೆಯಿಂದಾ ಬೆಳೆಸಿದೇ
ಬಿಸುಲು ಮಳೆಗೆ ನರಳದಂತೇ ನಿನ್ನ ನೆರಳಲಿ ಸಲಹಿದೇ
ಆ ಪ್ರೀತಿಯಾ ಮನ ಮರೆವುದೇ....ನಿನ್ನ ಕಂಗಳ....
ಬಳ್ಳಿಯಂತೆ ಹಬ್ಬಿ ನಿನ್ನಾ ಆಸರೆಯಲೀ ಬೆಳೆದೆನೂ
ಆ.....ಆ.....ಆ....ಆ....
ನನ್ನ ತಾಯಿಯ ಪಾದದಾಣೆ ಬೇರೆ ಏನನೂ ಅರಿಯೆನೂ
ನೀನ ನನ್ನಾ ದೇವನೂ....ನಿನ್ನ ಕಂಗಳ...
ನೀನು ನಕ್ಕರೆ ನಾನು ನಗುವೇ ಅತ್ತರೇ ನಾ ಅಳುವೆನೂ
ನಿನ್ನ ಉಸಿರಲಿ ಉಸಿರು ಬೆರೆತಿರೆ ನಿನ್ನಲೊಂದಾಗಿರುವೆನೂ
ನಾ ನಿನ್ನ ಕಾಣದೇ ಬದುಕೆನೂ....ನಿನ್ನ ಕಂಗಳ...
No comments:
Post a Comment